ನಮ್ಮ ಬಗ್ಗೆ

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತುರಾಮನಗರ ಜಿಲ್ಲೆಗಳ ಪ್ರಾದೇಶಿಕ ಸಹಕಾರಿ ಸಾಯವ ಕೃಷಿ ಕೃಷಿ ಯೂನಿಯನ್ ಲಿಮಿಟೆಡ್ ಸಹಕಾರಿಕಾಯ್ದೆ, 1959ರ ಕಲಂ 7 ಮತ್ತು 8ರ ಅಡಿಯಲ್ಲಿ ಈ ಒಕ್ಕೂಟವನ್ನುರಚಿಸಲಾಗಿದೆ.

ಸದರಿಒಕ್ಕೂಟಕ್ಕೆ ಈ ಕೆಳಗಿನವುಗಳ ಬೆಂಬಲವಿರುತ್ತದೆ:
31 ಗ್ರಾಮೀಣ ಮಟ್ಟದ ನೊಂದಾಯಿತ ಸಂಘಗಳು ಮತ್ತು ಸುಮಾರು 3000 ಕೃಷಿಕರು ಕೆಳಗಿನ ಮೂರು ಜಿಲ್ಲೆಗಳು ಈ ಒಕ್ಕೂಟದ ವ್ಯಾಪ್ತಿಗೆ ಒಳಪಡುತ್ತವೆ:
ರಾಮನಗರ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ

ಒಕ್ಕೂಟದಧ್ಯೇಯ ಮತ್ತು ಉದ್ದೇಶಗಳು:

ಪರಿಚಯ

ವರ್ಷ 2004ರ ನಂತರದಅವಧಿಯಲ್ಲಿಕರ್ನಾಟಕ ಸರ್ಕಾರದ ಸಮರ್ಪಕ ಬೆಂಬಲದೊಂದಿಗೆಜಿಲ್ಲಾ ಹಂತಗಳಲ್ಲಿ ಸಾವಯವ ಚಳವಳಿ ಆರಂಭಗೊಂಡಿತು. ಬಳಿಕ 2006-07ರ ಅವಧಿಯಲ್ಲಿ, ತಾಲ್ಲೂಕು ಮಟ್ಟದಲ್ಲಿಕೂಡ ಈ ಚಳವಳಿಯು ವ್ಯಾಪಕಗೊಂಡಿತು ಮತ್ತುಅಂತಿಮವಾಗಿ 2010-11ರ ವೇಳೆಗೆ ಇದು ಹೋಬಳಿ ಮಟ್ಟದಲ್ಲಿಯೂಕೂಡ ಆವರಿಸಿಕೊಂಡಿತು.

ಇದೇಅವಧಿಯಲ್ಲಿ ಸಾವಯವ ಬೇಸಾಯಕುರಿತಂತೆಕೃಷಿಕರಲ್ಲಿಜಾಗೃತಿ ಮೂಡಿಸಲಾಯಿತುಅಥವಾಕೃಷಿಕರು ಸ್ವರ್ತಜಾಗೃತವಾದರು. ಹೀಗಾಗಿ ಕೃಷಿಕರುತಮ್ಮ ಕೃಷಿ ಪದ್ಧತಿಯಲ್ಲಿ ಸಾವಯವ ಬೇಸಾಯದ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಲು ಆರಂಭಿಸುತ್ತ, ತಮ್ಮ ಜಮೀನುಗಳನ್ನು ಪರಿವರ್ತನೆಗೊಳಿಸಿದರು. ಆದರೆ, ಇಂತಹ ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲುಒಂದು ನೇರ ಮಾರುಕಟ್ಟೆಯಕೊರತೆಇರುವುದರಿಂದಾಗಿ, ಕೃಷಿಕರು ನಿಧಾನವಾಗಿ ಸಾವಯವ ಬೇಸಾಯದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದರು.

ಇಂತಹದೊಂದು ಸಂಕೀರ್ಣ ಸನ್ನಿವೇಶನವನ್ನು ನಿವಾರಿಸಲೆಂದೇ, ಕರ್ನಾಟಕದಾದ್ಯಂತ ಲಭ್ಯವಿರುವ ಸಾವಯವ ಸಮೂಹಗಳನ್ನು ಮತ್ತು ಸಾವಯವ ಬೇಸಾಯ ಸಮೂಹಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ, ಒಂದು ಸಾವಯವಒಕ್ಕೂಟವನ್ನು ಹುಟ್ಟುಹಾಕಬೇಕೆಂದುಕರ್ನಾಟಕ ಸರ್ಕಾರ ನಿರ್ಧಾರ ತಳೆಯಿತು.

ಈ ಒಕ್ಕೂಟವುಆರಂಭದಿಂದಲೇ ಪ್ರದೇಶವಾರು ಉಪ-ಒಕ್ಕೂಟಗಳನ್ನು ರಚಿಸಬೇಕೆಂದು ಉದ್ದೇಶಿಸಿದೆ.

ಬೆಂಗಳೂರು ಸಾವಯವಒಕ್ಕೂಟವುಸುಮಾರು 31 ಸಾವಯಕೃಷಿಕರ ಸಮೂಹಗಳ (ಸೊಸೈಟಿಗಳ ಕಾಯ್ದೆ, 1960ರ ಅಡಿಯಲ್ಲಿ ನೊಂದಾಯಿತ) ಸಂಪುರ್ಣ ಬೆಂಬಲದೊಂದಿಗೆತನ್ನಕಾರ್ಯಾಚರಣೆಯನ್ನು ಆರಂಭಿಸಿತು. ಒಕ್ಕೂಟವುತನ್ನಇವೆಲ್ಲಾ 31 ಕೃಷಿಕರ ಸಮೂಹದಿಂದಕ್ರೋಢಿಕೃತ ಸಾವಯವ ಉತ್ಪನ್ನಗಳನ್ನು ಪಡೆದುಕೊಳ್ಳುತ್ತದೆ ಮತ್ತುಇದರಿಂದಾಗಿ ಸದರಿ ಸಮೂಹಗಳಾದ್ಯಂತ ಸಾವಯವ ಬೇಸಾಯಕುರಿತಾತಆಸಕ್ತಿಯನ್ನು ವೃದ್ಧಿಸುತ್ತದೆ. ಒಕ್ಕೂಟವುಇವೆಲ್ಲಾ ಕಾರ್ಯಕ್ರಮಗಳ ಮೂಲಕ, ಕೆಳಗಿನವುಗಳನ್ನು ಸಾಧಿಸಲು ಹಾತೊರೆಯುತ್ತದೆ:

ಒಕ್ಕೂಟದ ಹೆಸರು ಮತ್ತು ವಿಳಾಸ

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತುರಾಮನಗರ ಜಿಲ್ಲೆಗಳ ಪ್ರಾದೇಶಿಕ ಸಹಕಾರಿ ಸಾವಯವ ಕೃಷಿ ಯೂನಿಯನ್ ಲಿಮಿಟೆಡ್
ಉದಯವಾಣಿ ಪತ್ರಿಕಾಲಯದ ಹತ್ತಿರ, ಕೆಂಪಲಿನಾಗನಹಳ್ಳಿ-562123
ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರಜಿಲ್ಲೆ.

ಒಕ್ಕೂಟದಲ್ಲಿ ಲಭ್ಯವಿರುವ ಸೇವೆಗಳು:-